ಜೂನ್ ೧೭ - ಜೂನ್ ತಿಂಗಳ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೮ನೇ ದಿನ (ಅಧಿಕ ವರ್ಷದಲ್ಲಿ ೧೬೯ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೮೮೫ - ಲಿಬರ್ಟೀ ಪ್ರತಿಮೆ ನ್ಯೂ ಯಾರ್ಕ್ ನಗರವನ್ನು ತಲುಪಿತು. ೧೯೪೦ - ಬಾಲ್ಟಿಕ್ ರಾಷ್ಟ್ರಗಳಾದ ಎಸ್ಟೋನಿಯ, ಲಾಟ್ವಿಯ ಮತ್ತು ಲಿಥುಎನಿಯ ಸೋವಿಯೆಟ್ ಒಕ್ಕೂಟದ ಆಳ್ವಿಕೆಯಡಿಯಲ್ಲಿ ಬಂದವು. ೧೯೪೪ - ಐಸ್‍ಲ್ಯಾಂಡ್ ಡೆನ್ಮಾರ್ಕ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೭೨ - ಅಮೇರಿಕ ದೇಶದಲ್ಲಿ ಶ್ವೇತ ಭವನದ ಐದು ಕೆಲಸಗಾರರು ಡೆಮೊಕ್ರೆಟಿಕ್ ಪಕ್ಷದ ಕಛೇರಿಯಲ್ಲಿ ಗೂಢಾಚಾರ ಮಾಡುವಾಗ ಸಿಕ್ಕಿಹಾಕಿಕೊಂಡು ವಾಟರ್‍ಗೇಟ್ ಪ್ರಕರಣ ಬೆಳಕಿಗೆ ಬಂದಿತು. == ಜನನ == ೧೯೨೦ - ಫ್ರಾನ್ಸ್‍ವ ಜಕೊಬ್, ಫ್ರಾನ್ಸ್ನ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ. ೧೯೪೨ - ಮೊಹಮದ್ ಎಲ್ ಬರದೈ, ಈಜಿಪ್ಟ್ನ ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದ ನಿರ್ದೇಶಕ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ. ೧೯೭೩ - ಲಿಯಾಂಡರ್ ಪಯಾಸ್, ಭಾರತದ ಟೆನ್ನಿಸ್ ಪಟು. == ನಿಧನ == == ರಜೆಗಳು/ಆಚರಣೆಗಳು == ಐಸ್‍ಲ್ಯಾಂಡ್ - ರಾಷ್ಟ್ರೀಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ